ತಾನು ಕಳ್ಳ, ಪರರ ನಂಬ: ಜನತೆಯ ಆತ್ಮಾವಲೋಕನಕ್ಕೆ ರಾಷ್ಟ್ರೀಯ(?) ನಾಯಕರ ಕರೆ

ತಾನು ಕಳ್ಳ, ಪರರ ನಂಬ: ಜನತೆಯ ಆತ್ಮಾವಲೋಕನಕ್ಕೆ ರಾಷ್ಟ್ರೀಯ(?) ನಾಯಕರ ಕರೆ

ನಮ್ಮ ಖರ್ಗೆ ಸಾಹೇಬ್ರು ಯಾವಾಗಲೂ ಹಂಗ, ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ಅಂದ್ರ ತಮ್ಮ ಗೆಲವು ಮತ್ತು ಕಳೆದ ೪೦-೫೦ ವರ್ಷಗಳಿಂದ ಎನೇನೂ ಬದಲಾಗದೆ ಹಾಗೆ ಉಳಿದಿರುವ ಕಲ್ಯಾಣ ಕರ್ನಾಟಕ ಅನ್ಕೊಂಡಾರ. ಯಾರಾದರೂ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡ್ತಿವಿ ಅಂದ್ರ ಅವರಿಗೆ ಗಿಮಿಕ್ ಅನಸ್ಲಿಕ್ಕೆ ಶುರುವಾಗತೈತ್ರಿ, ಯಾಕಂದ್ರಾ ಗಿಮಿಕ್ ಮ್ಯಾಲೆ ಅವರ್ದು ಪೇಟೆಂಟ್ ಐತಿನೋಡ್ರಿ ಅದಕ್ಕ. ಅದೇ ಗಿಮಿಕನ್ಯಾಗ ಒಂಬತ್ತ ಬ್ಯಾರೆ ಶಾಸಕರಾದ್ರು, ಕಾರ್ಮಿಕನಿಂದ ಕೆಂದ್ರ ಕಾರ್ಮಿಕ ಮಂತ್ರಿಗಳಾದ್ರು, ಎರಡು ಕ್ವಾಣಿ ಮನಿಯಿಂದ ಒಂದೊಂದು ಊರಾಗೂ ಎರಡೆರಡು ಬಂಗ್ಲೆ ಕಟ್ಟಿಸುವಂತ ಸಾಹುಕಾರ ಆದ್ರು.

ಆವಾಗೆಲ್ಲ ಯಾರಿಗೂ ಆತ್ಮಾವಲೋಕನ ಮಾಡ್ಕೊಳ್ಳಿಕ್ಕೆ ಹೇಳ್ಲೆಯಿಲ್ಲ, ಈಗ ಮಗ ಸೋತಾ ಅಂದ ಕೂಡ್ಲೆ ಜನರು ಆತ್ಮಾವಲೋಕನ ಮಾಡ್ಕೋಬೇಕಾದ ಸಮಯ ಬಂತು ಅನ್ನಿಸ್ಲಿಕತ್ತೈತಿ ನಮ್ಮ ಈ ರಾಷ್ಟ್ರೀಯ(?) ನಾಯಕರಿಗೆ.

ಆದ್ರು ಖರ್ಗೆ ಸಾಹೇಬ್ರ ಒಂದು ಮಾತು ನಿಜ ಇದು ಯಡಿಯೂರಪ್ಪನ ಮತ್ತೊಂದು ಗಿಮಿಕ್, ಯಾಕಂದ್ರ ನೀವೆಲ್ಲಾ ಒಂದ, ಒಬ್ಬರನ್ನು ನೋಡಿ ಇನ್ನೊಬ್ರ ಇಂಥಾ ಗಿಮಿಕ್ ಕಲ್ತಿರ್ತಿರಿ, ಆದ್ರೂ ಸಾಹೇಬ್ರ ಜನರು ನಿಮ್ಮ ಗಿಮಿಕ್ ನೋಡಿ ಬ್ಯಾಸೊತ್ತಾರ ಇಯಪ್ಪಂದು ಸ್ವಲ್ಪ ಗಿಮಿಕ್ ನೋಡ್ಲಿಯಲಾ…ನಿಮ್ಮ ನಿಮ್ಮ ಗಿಮಿಕನ್ಯಾಗ ಹೈದ್ರಾಬಾದ್ ಕರ್ನಾಟಕ ಅಭಿವೃದ್ದಿಯಾಗದಿದ್ರೂ ನಷ್ಟಯಿಲ್ಲಾ, ಪ್ಲೀಜ್ರಿ..ಇನ್ನಷ್ಟು ಹಾಳು ಮಾಡಬ್ಯಾಡ್ರಿ..

ಸುದ್ದಿಕೃಪೆ: ಕನ್ನಡಪ್ರಭ

One Response to ತಾನು ಕಳ್ಳ, ಪರರ ನಂಬ: ಜನತೆಯ ಆತ್ಮಾವಲೋಕನಕ್ಕೆ ರಾಷ್ಟ್ರೀಯ(?) ನಾಯಕರ ಕರೆ

  1. ಖರೇನ ಖರ್-ಗೆ ಅವರs ಆತ್ಮಾವಲೋಕನ ಮಾಡಿಕೋಬೇಕು. ಆದರ ಅವರಿಗೆ ಎಲ್ಲಿ ಐತಿ ಆತ್ಮ? ಇಷ್ಟ ವರ್ಷ ಆತು ಖರ್ಗೆ ಅವರ ಆತ್ಮ ನಮ್ಮ ಕಣ್ಣಿಗೆ ಬಿದ್ದಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.