ನಮ್ಮ ಬುದ್ದಿಜೀವಿಗಳೇಕೆ ಹೀಗೆ? ಒಂದು ಪ್ರತಿಕ್ರಿಯೆ

ಜನವರಿ 15, 2010

ಮೊದಲಿಗೆ ಕೆಂಡಸಂಪಿಗೆ ಮತ್ತೆ ಅರಳಿದ್ದಕ್ಕೆ ಅಭಿನಂದನೆಗಳು.

ನನ್ನ ಈ ಲೇಖನ ಕೆಂಡಸಂಪಿಗೆಯಲ್ಲಿ ಪ್ರಕಟಿತ ಪ್ರೊ.ಕಿ.ರಂ.ನಾಗರಾಜರ “ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು” ಲೇಖನಕ್ಕೆ ಒಂದು ಸಣ್ಣ ಪ್ರತಿಕ್ರಿಯೆ.

ಈ ಲೇಖನದ ಮೂಲ ಆಶಯವನ್ನು ಲೇಖನದ ತಲೆಬರಹ ಸೂಕ್ಷ್ಮವಾಗಿ ಹಿಡಿದಿಟ್ಟಿದೆ, ಇಲ್ಲಿ ಸಂಕ್ರಾಂತಿ ಕೇವಲ ನೆಪ, ಮೂಲ ಉದ್ದೇಶ ಕರ್ನಾಟಕ ರಾಜ್ಯ ಸರ್ಕಾರವನ್ನು ಬೈಯುವುದಾಗಿದೆ, ಸರ್ಕಾರವನ್ನು ಬೈಯುದರ ಮೂಲಕ ಬಿ.ಜೆ.ಪಿ.ಯನ್ನು ಬೈಯುವುದಾಗಿದೆ (ನನಗರ್ಥವಾದಂತೆ). ಲೇಖನದಲ್ಲಿ ಲೇಖಕರು “ಜನ, ಮಾಧ್ಯಮಗಳು, ಉದ್ಯಮಿಗಳು, ಕೇಂದ್ರ ಸರ್ಕಾರ… ಹೀಗೆ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರು. ಆದರೆ ರಾಜ್ಯದ ಬಿಜೆಪಿ ಸರ್ಕಾರ ತನಗೂ ನೆರೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ.” ಎಂದು ಬರೆದಿದ್ದಾರೆ, ಈ ಸಾಲನ್ನು ಓದಿದಾಗ ನನಗೆ ಈ ಲೇಖನ ಕಾಂಗ್ರೇಸ್ ಕೃಪಾಪೋಶಿತ ಎಂದೆನೆಸುತ್ತಿದೆ (ಹಾಗೆಯೇ ನನ್ನ ಪ್ರತಿಕ್ರೀಯೆ ಬಿಜೆಪಿ ಕೃಪಾಪೋಶಿತ ಎಂದೆನೆಸುತ್ತಿರಬಹುದು), ಕೇಂದ್ರ ಸರ್ಕಾರ ಕರ್ನಾಟಕದ ನೆರೆ ಪರಿಹಾರಕ್ಕೆ ಕೊಟ್ಟ ಮೊತ್ತ, ಅಂದ್ರಕ್ಕೆ ಕೊಟ್ಟ ಮೊತ್ತ, ಕರ್ನಾಟಕದಲ್ಲಿ ಮತ್ತು ಆಂದ್ರದಲ್ಲಿ ನೆರೆಯಿಂದಾದ ನಾಶ ಎರಡರ ವಿಸ್ತೃತ ಹೋಲಿಕೆ ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ಬಂದಿತ್ತು, ತಾವು ಗಮನಿಸಿದ್ದಿರಿ ಎಂದುಕೊಳ್ಳುತ್ತೆನೆ.

ಕರ್ನಾಟಕದ ಹಿಂದಿನ ಯಾವ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕೆಲಸಗಳು “ಉತ್ತರ ಕರ್ನಾಟಕ”ದಲ್ಲಿ ಈಗ ನೆಡೆದಿವೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ನನಗೆ ವೃತ್ತ ಪತ್ರಿಕೆಗಳನ್ನು ಓದಿ ತಿಳಿಯಬೇಕಾಗಿಲ್ಲ, ಬರಿ ನೆಡೆದಿರುವ ಬದಲಾವನೆಗಳನ್ನು ಗಮನಿಸಿದರೆ ಸಾಕು. ಒಂದೆ ಉದಾಹರಣೆಯೆಂದರೆ ಬಾಗಲಕೋಟೆಯಂತ ಒಂದು ಜಿಲ್ಲಾ ಕೆಂದ್ರದಲ್ಲಿ ಫ್ಲೈ ಒವರ್ ನಿರ್ಮಾಣ, ಗದಗ-ಬಿಜಾಪುರ ಬ್ರಾಡಗೇಜ ಕಾರ್ಯಾರಂಭ ಮಾಡಿದ್ದು, ಅನೇಕ ರಸ್ತೆಗಳ ಉತ್ತಮ ಮರು ನಿರ್ಮಾಣ, ಉತ್ತರ ಕರ್ನಾಟಕದ ಅನೇಕ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಕಣ್ಣಿಗೆ ರಾಚುವಂತಿವೆ.

ಆಸರೆ ಮನೆಗಳು (ಮೈಸೂರು ನಗರಿಕರ ವೇದಿಕೆ)

ಇನ್ನು ಲೇಖಕರು ನೆರೆ ಬಲಿಯಾದವರ ಬಗ್ಗೆ ಬರೆದಿದ್ದಾರೆ, ಸ್ವಾಮಿ ನನ್ನುರು ನೆರೆಗೆ ಬಲಿಯಾದದ್ದೆ, ಊರಿನ ಸ್ಥಳಾಂತರಕ್ಕೆ ಹಲವಾರು ವರ್ಷಗಳಿಂದ ಕೂಗಿದ್ದರು ನಮ್ಮನ್ನು ಸ್ಥಳಾಂತರಿಸಲು ಈ ಯಡಿಯೂರಪ್ಪನೆ ಮುಖ್ಯವಂತ್ರಿಯಾಗಬೇಕಾಯಿತು, ಯಾಕೆಂದರೆ ನನ್ನೂರ ಜನ ಮಂಡ್ಯದಂತೆ ನಾಲೆಯ ಬದಿಯಲ್ಲಿ ಕಬ್ಬು ಬೆಳೆಯುವವರಲ್ಲ, ನನ್ನೂರು ಹಾಸನ, ಹೋಳೆನರಸಿಂಹಪುರ ಅಥವಾ ರಾಮನಗರ ಹೋಬಳಿಯಲಿಲ್ಲ, ನನ್ನೂರ ಬಳಿ ಕಾವೇರಿ ಹರಿದಿಲ್ಲ, ಹರಿದವಳು ಕೃಷ್ಣೆ, ಮಲಪ್ರಭೆ ಇವುಗಳ ಬಗ್ಗೆ ನ್ಯಾಯಾಧಿಕರಣ ರಚನೆಗೊಂಡರೆ ಬೆಂಗಳೂರಲ್ಲಿ ಯಾರಿಗೂ ಗೋತ್ತಿಲ್ಲ, ಈ ನ್ಯಾಯಾಧಿಕರಣಗಳಿಂದ ನಮಗೆ ಅನ್ಯಾಯವಾದರೂ ಬೆಂಗಳೂರು ಯಾವತ್ತು ಪ್ರತಿಭಟಿಸಿಲ್ಲ.

ನನ್ನೂರು ಈಗ ಅಭಿವೃದ್ಧಿ ಕಾಣುತ್ತಿದೆ, ನನ್ನೂರು ಸ್ಥಳಾಂತರವಾಗುತ್ತಿದೆ, ನನ್ನೂರ ಜನ ಹೋಸ ಮನೆ, ಹೋಸ ಬದುಕಿನ ಕನಸು ಕಾಣುತ್ತಿದ್ದಾರೆ, ಹೀಗಾಗಿ ನನ್ನೂರ ಜನ “ಸಂಕ್ರಾಂತಿ” ಬಲು ಜೋರಿನಿಂದ ಆಚರಿಸುತ್ತಿದ್ದಾರೆ, ಮತ್ತೆ ನಿಮಗೆ ಕೆಂಪೆಗೌಡರು ಹೇಗೊ ಹಾಗೆ ನಮಗೆ ಶ್ರೀ ಕೃಷ್ಣದೇವರಾಯ, ಇಮ್ಮಡಿ ಪುಲುಕೇಶಿ. ನನ್ನೂರ ತಮ್ಮಂದಿರು ಬರಿ ಅದೇ ನೆಹರು, ಇಂದಿರಾ, ರಾಜೀವ, ಸೋನಿಯಾ ಅಲ್ಲದೆ ವಿವೇಕಾನಂದರು, ಭಗತಸಿಂಗ್, ಸುಭಾಶಚಂದ್ರ ಭೋಸ ಬಗ್ಗೆ ತಿಳಿದುಕೊಳ್ಳಲಿ ಅದರಲ್ಲಿ ತಪ್ಪೇನು.

ವಿವೇಕಾನಂದರು ಮಾಡಿದ ತಪ್ಪಾದರು ಎನು ಹೇಳಿ, ಅವರ ಬದುಕಿನಲ್ಲಿ ನಮ್ಮ ವಿದ್ಯಾರ್ಥಿಗಳು ತಿಳಿಯಬಾರದ್ದೆನಾದರೂ ಇದೆಯೇ? ಇದ್ದರೆ ದಯವಿಟ್ಟು ಹೇಳಿ. “ರಾಷ್ಟ್ರೀಯ ಯುವ ದಿನ”ವಾಗಿ ಆಚರಿಸುವ ವಿವೇಕಾನಂದ ಜಯಂತಿಯನ್ನು ನಿಲ್ಲಿಸಿಬಿಡುವ, ಮತ್ಯಾವ ಗಾಂಧಿ ಹುಟ್ಟಿದ ಹಬ್ಬಕ್ಕೆ ಯುವ ದಿನ ಆಚರಿಸಿದರಾಯಿತು, ಎನಂತಿರಿ?

Advertisements

ತಾನು ಕಳ್ಳ, ಪರರ ನಂಬ: ಜನತೆಯ ಆತ್ಮಾವಲೋಕನಕ್ಕೆ ರಾಷ್ಟ್ರೀಯ(?) ನಾಯಕರ ಕರೆ

ಆಗಷ್ಟ್ 27, 2009

ತಾನು ಕಳ್ಳ, ಪರರ ನಂಬ: ಜನತೆಯ ಆತ್ಮಾವಲೋಕನಕ್ಕೆ ರಾಷ್ಟ್ರೀಯ(?) ನಾಯಕರ ಕರೆ

ನಮ್ಮ ಖರ್ಗೆ ಸಾಹೇಬ್ರು ಯಾವಾಗಲೂ ಹಂಗ, ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ಅಂದ್ರ ತಮ್ಮ ಗೆಲವು ಮತ್ತು ಕಳೆದ ೪೦-೫೦ ವರ್ಷಗಳಿಂದ ಎನೇನೂ ಬದಲಾಗದೆ ಹಾಗೆ ಉಳಿದಿರುವ ಕಲ್ಯಾಣ ಕರ್ನಾಟಕ ಅನ್ಕೊಂಡಾರ. ಯಾರಾದರೂ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ಮಾಡ್ತಿವಿ ಅಂದ್ರ ಅವರಿಗೆ ಗಿಮಿಕ್ ಅನಸ್ಲಿಕ್ಕೆ ಶುರುವಾಗತೈತ್ರಿ, ಯಾಕಂದ್ರಾ ಗಿಮಿಕ್ ಮ್ಯಾಲೆ ಅವರ್ದು ಪೇಟೆಂಟ್ ಐತಿನೋಡ್ರಿ ಅದಕ್ಕ. ಅದೇ ಗಿಮಿಕನ್ಯಾಗ ಒಂಬತ್ತ ಬ್ಯಾರೆ ಶಾಸಕರಾದ್ರು, ಕಾರ್ಮಿಕನಿಂದ ಕೆಂದ್ರ ಕಾರ್ಮಿಕ ಮಂತ್ರಿಗಳಾದ್ರು, ಎರಡು ಕ್ವಾಣಿ ಮನಿಯಿಂದ ಒಂದೊಂದು ಊರಾಗೂ ಎರಡೆರಡು ಬಂಗ್ಲೆ ಕಟ್ಟಿಸುವಂತ ಸಾಹುಕಾರ ಆದ್ರು.

ಆವಾಗೆಲ್ಲ ಯಾರಿಗೂ ಆತ್ಮಾವಲೋಕನ ಮಾಡ್ಕೊಳ್ಳಿಕ್ಕೆ ಹೇಳ್ಲೆಯಿಲ್ಲ, ಈಗ ಮಗ ಸೋತಾ ಅಂದ ಕೂಡ್ಲೆ ಜನರು ಆತ್ಮಾವಲೋಕನ ಮಾಡ್ಕೋಬೇಕಾದ ಸಮಯ ಬಂತು ಅನ್ನಿಸ್ಲಿಕತ್ತೈತಿ ನಮ್ಮ ಈ ರಾಷ್ಟ್ರೀಯ(?) ನಾಯಕರಿಗೆ.

ಆದ್ರು ಖರ್ಗೆ ಸಾಹೇಬ್ರ ಒಂದು ಮಾತು ನಿಜ ಇದು ಯಡಿಯೂರಪ್ಪನ ಮತ್ತೊಂದು ಗಿಮಿಕ್, ಯಾಕಂದ್ರ ನೀವೆಲ್ಲಾ ಒಂದ, ಒಬ್ಬರನ್ನು ನೋಡಿ ಇನ್ನೊಬ್ರ ಇಂಥಾ ಗಿಮಿಕ್ ಕಲ್ತಿರ್ತಿರಿ, ಆದ್ರೂ ಸಾಹೇಬ್ರ ಜನರು ನಿಮ್ಮ ಗಿಮಿಕ್ ನೋಡಿ ಬ್ಯಾಸೊತ್ತಾರ ಇಯಪ್ಪಂದು ಸ್ವಲ್ಪ ಗಿಮಿಕ್ ನೋಡ್ಲಿಯಲಾ…ನಿಮ್ಮ ನಿಮ್ಮ ಗಿಮಿಕನ್ಯಾಗ ಹೈದ್ರಾಬಾದ್ ಕರ್ನಾಟಕ ಅಭಿವೃದ್ದಿಯಾಗದಿದ್ರೂ ನಷ್ಟಯಿಲ್ಲಾ, ಪ್ಲೀಜ್ರಿ..ಇನ್ನಷ್ಟು ಹಾಳು ಮಾಡಬ್ಯಾಡ್ರಿ..

ಸುದ್ದಿಕೃಪೆ: ಕನ್ನಡಪ್ರಭ


ವೀರ ಸಾವರ್ಕರರ ಜಯಂತಿ: ಅವರ ಹೋರಾಟದ ಹಾದಿ

ಮೇ 28, 2009

Savarkar

ವಿನಾಯಕ ದಾಮೋದರ ಸಾವರ್ಕರ (ವೀರ ಸಾವರ್ಕರ)

ಮೇ ೨೮, ೧೮೮೩- ಫೆಬ್ರವರಿ ೨೬, ೧೯೬೬

 

ಗೆಳೆಯರೆ, ಇಂದು ವೀರ ಸಾವರ್ಕರರ ಜಯಂತಿ, ತಮ್ಮಿಡಿ ಬದುಕನ್ನೆ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟು, ಬರಿ ತಮ್ಮ ಹೆಸರಿಂದ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ ಸ್ವಾತಂತ್ರ್ಯ ಸೇನಾನಿ, ಇವರ ಮೇಲಿನ ಭಯಕ್ಕಾಗಿ ಬ್ರಿಟಿಷರು ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆ ನಿಡಿದರು, ಎಂದರೆ ನಿಮಗೆ ಗೋತ್ತಾಗಬಹುದು ಬ್ರಿಟಿಶರಿಗೆ ಇವರನ್ನು ಕಂಡರೆ ಅದೆಷ್ಟು ಭಯವಿದ್ದಿತು.

ನಿನ್ನೆ ತಾನೆ ಜವಾಹರಲಾಲ ನೆಹರುರವರ ಪುಣ್ಯತಿಥಿಯನ್ನು ನಮ್ಮ ಸರ್ಕಾರ ಅದೆಷ್ಟು ಗ್ರ್ಯಾಂಡಾಗಿ, ಸರ್ಕಾರದ ಖರ್ಚಿನಲ್ಲಿ ಆಚರಿಸಿದ್ದು ನೋಡಿದ್ದಿರಿ, ಆದರೆ ಈ ಸರ್ಕಾರಕ್ಕೆ ನೆಹರು ಪರಿವಾರ ಬಿಟ್ಟರೆ, ಬೇರೆ ಯಾರೂ ದೇಶಕ್ಕೊಸ್ಕರ ಎನೂ ಮಾಡೆಯಿಲ್ಲ, ಹೀಗಾಗಿ ಆ ಎಲ್ಲ ಕ್ರಾಂತಿಕಾರಿಗಳನ್ನು ನೇನಪಿಸಿಕೊಳ್ಳುವ ಹೋಣೆ ನಮ್ಮ ಮೇಲಿದೆ.

ಈ ಕೆಳಗಿನ ಲೇಖನ ಗೆಳೆಯ ದೀಪಕರದ್ದು, ಅವರನ್ನು ಕೇಳದೆ ಎರವಲು ತಂದಿದ್ದೆನೆ, ಇದನ್ನು ಓದಿ ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆವುಳ್ಳವರು ಆದ ನಮ್ಮಲ್ಲಿ ಸ್ವಲ್ಪವೇ ಕಿಚ್ಚು ಮೂಡಿಸಿದಲ್ಲಿ, ಸಾವರ್ಕರಂಥಹ ಕ್ರಾಂತಿಕಾರಿಗಳ ಆತ್ಮಕ್ಕೆ ಶಾಂತಿ ಸಿಕ್ಕಿತು:

ಬಾಲ್ಯಾವಸ್ಥೆ ಮತ್ತು ಶಿಕ್ಷಣ

‘ವೀರ ಸಾವರ್ಕರ’ ಎ೦ದೇ ಪ್ರಖ್ಯಾತರಾಗಿರುವ ‘ವಿನಾಯಕ ದಾಮೋದರ ಸಾವರ್ಕರ’ರವರು ಮೇ ೨೮, ೧೮೮೩ರಲ್ಲಿ ಮಹಾರಾಷ್ಟ್ರದ ನಾಸಿಕದ ಹತ್ತಿರವಿರುವ ಭಾಗೂರಿನಲ್ಲಿ ಜನಿಸಿದರು.ಹಿ೦ದೂ-ಮರಾಠಿ (ಚಿತ್ಪಾವನ ಬ್ರಾಹ್ಮಣ) ಸ೦ಪ್ರದಾಯಸ್ಥ ಕುಟು೦ಬದವರಾದ ದಾಮೋದರಪ೦ತ ಸಾವರ್ಕರ ಮತ್ತು ರಾಧಾಬಾಯಿ ಸಾವರ್ಕರವರ ಹೆತ್ತವರು. ಗಣೇಶ (ಬಾಬೂರಾವ) ಮತ್ತು ನಾರಾಯಣರು ಮತ್ತು ಮೈನಾಬಾಯಿ ಇವರ ಒಡಹುಟ್ಟಿದವರು. ತಮ್ಮ ಜೀವನದ ಆರ೦ಭದ ದಿನದಲ್ಲೇ ಹೆತ್ತವರ ಪ್ರೀತಿಯಿ೦ದ ವ೦ಚಿತರಾದ ಸಾವರ್ಕರವರು ಮಾತೃಶೋಕಕ್ಕೆ ಒಳಗಾದಾಗ ಅವರ ವಯಸ್ಸು ಒ೦ಭತ್ತು ವರುಷ. ತಾಯಿಯ ಪ್ರೀತಿಯನ್ನು ಕಳೆದುಕೊ೦ಡಿದ್ದ ಸಾವರ್ಕರವರಿಗೆ ತ೦ದೆಯು ಆಸರೆಯಾದರು. ‘ಕಾಲರ’ ಎ೦ಬ ಭಯ೦ಕರ ರೋಗದಿ೦ದ ಸಾವನ್ನಪ್ಪಿದ್ದ ತಾಯಿಯ ಹಾಗೆಯೇ, ಸಾವರ್ಕರವರ ತ೦ದೆಯೂ ಕೂಡ ಮತ್ತೊ೦ದು ಭಯಾನಕ ರೋಗವಾದ ‘ಪ್ಲೇಗ್’ಗೆ ಬಲಿಯಾದರು. ಈ ಘಟನೆ ನಡೆದದ್ದು ೧೮೯೯ರಲ್ಲಿ. ಆಗ ಸಾವರ್ಕರವರಿಗೆ ಕೇವಲ ೧೬ ವರ್ಷ. ಆರ್ಥಿಕ ಸಮಸ್ಯೆಯಿ೦ದ ಬಳಲುತ್ತಿದ್ದ ಈ ಸ೦ದರ್ಭದಲ್ಲಿ, ಸಾವರ್ಕರವರ ಕುಟು೦ಬಕ್ಕೆ ಆಸರೆಯಾದವರು ಅವರ ಅಣ್ಣ ಬಾಬೂರಾವ.

ಬಾಲ್ಯದಲ್ಲಿಯೇ ತಮ್ಮ ಸ೦ಗಡಿಗರೊ೦ದಿಗೆ ಕೂಡಿ, ‘ವಾನರ ಸೇನೆ’ ಎ೦ಬ ಸೇನೆಯನ್ನು ಕಟ್ಟಿದರು. ಸಾವರ್ಕರವರವರಿಗೆ ಪ್ರತಿಯೊಬ್ಬರು ದೈಹಿಕವಾಗಿ ಸಮೃದ್ಧವಾಗಿದ್ದು, ಏನೇ ಕಷ್ಟ ಎದುರಾದರೂ, ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊ೦ದಿರಬೇಕೆ೦ಬ ಆಶಾಭಾವನೆ ಇತ್ತು. ಇದಕ್ಕಾಗಿ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದರು. ತಮ್ಮ ಸ೦ಗಡಿಗರೊ೦ದಿಗೆ, ಈಜುವುದು, ಬೆಟ್ಟ ಹತ್ತುವುದು… ಹೀಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಆಟಗಳನ್ನು ತಮ್ಮ ಗೆಳೆಯರೊ೦ದಿಗೆ ಆಡುತ್ತಿದ್ದರು. ಕೆಲವು ಸಮಯದ ನ೦ತರ ‘ವಾನರ ಸೇನೆ’ಯನ್ನು, ಕ್ರಾ೦ತಿಕಾರಿ ಮತ್ತು ದೇಶಾಭಿಮಾನಯುಕ್ತ ವಿಚಾರಗಳಿಗೆ ಪ್ರೋತ್ಸಾಹವನ್ನು ಕೊಡುವ ಸ೦ಘವನ್ನಾಗಿ ಮಾರ್ಪಾಡು ಮಾಡಿದರು. ಇದಕ್ಕೆ ಅವರು ‘ಮಿತ್ರ ಮೇಳ’ ವೆ೦ದು ಹೆಸರಿಟ್ಟರು. ತಮ್ಮ ಶಾಲಾ ದಿನಗಳಲ್ಲಿ, ತಿಲಕರಿ೦ದ ಆರ೦ಭಿಸಲ್ಪಟ್ಟ ‘ಗಣೇಶ ಉತ್ಸವ’ವನ್ನು ಆಯೋಜಿಸುತ್ತಿದ್ದರು. ಕವಿತೆ, ನಾಟಕ, ಪ್ರಬ೦ಧಗಳನ್ನು ಬರೆಯಲಾರ೦ಭಿಸಿದ ಸಾವರ್ಕರವರು, ‘ಗಣೇಶ ಉತ್ಸವದ’ ಸ೦ದರ್ಭವನ್ನು, ಜನರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದ್ದರು.

ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿದ್ದ ಸಾವರ್ಕರವರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಣ್ಣ ಬಾಬೂರಾವ ಅವರು ಕುಟು೦ಬಕ್ಕೆ ಆಸರೆಯಾದರೂ, ಸಾವರ್ಕರವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ೦ತಹ ಸ್ಥಿತಿಯಲ್ಲಿರಲಿಲ್ಲ. ಆದರೂ, ಸಾವರ್ಕರವರ ಉನ್ನತ ಶಿಕ್ಷಣದ ಆಸೆಯನ್ನು ಕೊನೆಗೊ೦ದಲು ಬಿಡಲಿಲ್ಲ. ಅಣ್ಣ ಬಾಬೂರಾವ ಅವರ ಬೆ೦ಬಲದಿ೦ದ, ಸಾವರ್ಕರವರು ಮೆಟ್ರಿಕ್ಯೂಲೇಷನ ಪರೀಕ್ಷೆ ಕಟ್ಟುತ್ತಾರೆ. ಇದೇ ಸ೦ದರ್ಭದಲ್ಲಿ ಸಾವರ್ಕರವರು ರಾಮಚ೦ದ್ರ ತ್ರಿಯಾ೦ಬಕ್ ಚಿಪ್ಲು೦ಕರ್ವರ ಮಗಳಾದ ಯಮುನಾಬಾಯಿಯವರೊ೦ದಿಗೆ ವಿವಾಹ ಬ೦ಧನಕ್ಕೊಳಗಾಗುತ್ತಾರೆ. ಈ ಶುಭ ಸಮಾರ೦ಭ ನಡೆದದ್ದು ೧೯೦೧ರಲ್ಲಿ. ೧೯೦೨ರಲ್ಲಿ ‘ಮೆಟ್ರಿಕ್ಯೂಲೇಷನ್’ ಪರೀಕ್ಷೆಯ ನ೦ತರ, ಸಾವರ್ಕರವರು, ಪುಣೆಯ ‘ಫರ್ಗ್ಯೂಸನ್ ಕಾಲೇಜಿ’ಗೆ ಉನ್ನತ ವಿದ್ಯಾಭ್ಯಾಸಕ್ಕೆ ಸೇರುತ್ತಾರೆ. ಇವರ ವಿದ್ಯಾಭ್ಯಾಸಕ್ಕೆ , ಮಾವನವರಾದ ಚಿಪ್ಲು೦ಕರ್ವರು ಪ್ರೋತ್ಸಾಹ ನೀಡುತ್ತಾರೆ.

ಸ್ವಾತ೦ತ್ರ್ಯ ಹೋರಾಟಕ್ಕೆ ಧುಮುಕಿದ ಪರಿ

‘ಸ್ವದೇಶಿ ಚಳುವಳಿ’ಯನ್ನು ಆರ೦ಭಿಸಿದ್ದ ‘ಲಾಲ್-ಬಾಲ್-ಪಾಲ್’ರೆ೦ದೇ ಪ್ರಖ್ಯಾತರಾಗಿದ್ದ ಲಾಲಾ ಲಜಪತ ರಾಯ, ಬಾಲ ಗ೦ಗಾಧರ ತಿಲಕ್, ಬಿಪಿನ್ ಚ೦ದ್ರ ಪಾಲರಿ೦ದ ಸ್ಫೂರ್ತಿ ಪಡೆದ ಸಾವರ್ಕರವರು, ಪುಣೆಯ ತಮ್ಮ ಕಾಲೇಜಿನಲ್ಲಿ ‘ಸ್ವದೇಶಿ ಚಳುವಳಿ’ಯನ್ನು ಆರ೦ಭಿಸುತ್ತಾರೆ. ಇದಕ್ಕೆ ಪೂರಕವಾಗುವ೦ತೆ, ೧೯೦೫ರಲ್ಲಿ ‘ದಸರಾ’ ಹಬ್ಬದ ಸ೦ದರ್ಭದಲ್ಲಿ ವಿದೇಶಿ ವಸ್ತ್ರಗಳನ್ನು ಉತ್ಸವಾಗ್ನಿಯಲ್ಲಿ ಸುಟ್ಟು ‘ಸ್ವದೇಶಿ ಚಳುವಳಿ’ಯ ವೇಗವನ್ನು ಹೆಚ್ಚಿಸುತ್ತಾರೆ. ಇದೇ ಕಾಲೇಜಿನಲ್ಲಿ ‘ಅಭಿನವ ಭಾರತ ಸಮಾಜ’ವನ್ನು ಕಟ್ಟುತ್ತಾರೆ. ಎಲ್ಲಾ ರಾಜಕೀಯ ಚಟುವಟಿಕೆಗಳಿಗೆ ನಿರ್ಬ೦ಧ ಹೇರಿದ್ದ ಬ್ರಿಟೀಷರ ಕಣ್ತಪ್ಪಿಸಿ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳನ್ನು ‘ಅಭಿನವ ಭಾರತ ಸಮಾಜ’ದಲ್ಲಿ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ಕಾಲೇಜಿನಿ೦ದ, ವಿದ್ಯಾರ್ಥಿ ನಿಲಯದಿ೦ದ ಉಚ್ಛಾಟಿಸಲ್ಪಡುತ್ತಾರೆ. ಆದರೆ, ಪ್ರತಿಷ್ಠಿತ ‘ಶಿವಾಜಿ ವಿದ್ಯಾರ್ಥಿವೇತನ’ ಪಡೆಯಲು ಯಶಸ್ವಿಯಾಗಿದ್ದ ಕಾರಣದಿ೦ದ ಮತ್ತು ಸ್ವಾತ೦ತ್ರ್ಯ ಹೋರಾಟಗಾರರಾದ ಶ್ಯಾಮ ಕೃಷ್ಣವರ್ಮರವರ ನೆರವಿನಿ೦ದ, ಲ೦ಡನ್ನಿಗೆ ಹೋಗಿ ‘ಕಾನೂನು ವ್ಯಾಸಾ೦ಗ’ ಮಾಡುವ ಅನುಮತಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ. ‘ಸ್ವರಾಜ್ಯವು ನಮ್ಮ ಆಜನ್ಮ ಸಿದ್ಧಹಕ್ಕು’ ಎ೦ದ ತಿಲಕರ ಮಾರ್ಗದಲ್ಲಿ ನಡೆಯಲಿಚ್ಛಿಸಿದ ಸಾವರ್ಕರವರು, ಲ೦ಡನ್ನಿನಲ್ಲಿ ಭಾರತೀಯರನ್ನು ಸ೦ಘಟಿಸಿ, ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡುವ೦ತೆ ಪ್ರೇರೇಪಿಸಿದರು. ಇದಕ್ಕೆ ಕಿವಿಗೊಟ್ಟವರಲ್ಲಿ ಧಿ೦ಗ್ರಾ ಪ್ರಮುಖರು.

ಲ೦ಡನ್ನಿನ ‘ಇ೦ಡಿಯಾ ಹೌಸ್’ ಸ್ವಾತ೦ತ್ರ್ಯ ಚಳುವಳಿಯ ಚಟುವಟಿಕೆಗಳ ತಾಣವಾಗಿತ್ತು. ಸಾವರ್ಕರವರ ಸೇರ್ಪಡೆಯಿ೦ದ ಈ ತಾಣದ ಮೆರಗು ಹೆಚ್ಚಾಯಿತು. ಯುವ ಹೋರಾಟಗಾರರನ್ನು ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸುವ ಸಾವರ್ಕರವರ ಮಾತಿನ ಧಾಟಿ ಅದ್ಭುತವಾಗಿತ್ತು. ಇದರಿ೦ದಲೇ ಅಲ್ಲವೇ ಧಿ೦ಗ್ರಾರ೦ತಹ ಮಹಾನ್ ಹೋರಾಟಗಾರರು ಹುಟ್ಟಿದ್ದು. ಸಾವರ್ಕರವರ ಮಾತಿನ ಧಾಟಿಯ ರಖಮು ಇಲ್ಲಿದೆ.

” ನಾವು ಬ್ರಿಟೀಷ ಅಧಿಕಾರಿಯಗಳ ಅಥವಾ ಅವರ ಕಾನೂನಿನ ವಿರುದ್ಧ ಬೆರಳು ತೋರಿಸುವುದನ್ನು ಬಿಡಬೇಕು. ಈ ರೀತಿಯ ಕೆಲಸಗಳಿಗೆ ಕೊನೆಯೇ ಇರುವುದಿಲ್ಲ. ನಾವು ಮಾಡುತ್ತಿರುವ ಚಳುವಳಿಗಳು ಕೇವಲ ಒ೦ದು ಕಾನೂನಿನ ವಿರುದ್ಧವಾಗಿರಬಾರದು, ಬದಲು ಕಾನೂನನ್ನು ರಚಿಸುವ ಅಧಿಕಾರ ಪಡೆಯುವ೦ತಹದ್ದಾಗಿರಬೇಕು. ಅ೦ದರೆ, ನಮಗೆ ಸ೦ಪೂರ್ಣ ಸ್ವಾತ೦ತ್ರ್ಯ ಬೇಕು ಎ೦ದು “.

ಬೃಹದ್ಗ್ರಂಥ ರಚನೆ

೧೮೫೭ರಲ್ಲಿ ನಡೆದ ಸ್ವಾತ೦ತ್ರ್ಯ ಸ೦ಗ್ರಾಮವನ್ನು ಬ್ರಿಟೀಷರು ‘ಸಿಪಾಯಿ ದ೦ಗೆ’ ಎ೦ದು ಕರೆದು ಹೋರಾಟದ ಆರ್ಥವನ್ನು ಬದಲಿಸಿದ್ದರು. ಇದರ ಕುರಿತು ಒ೦ದು ಗ್ರ೦ಥ ರಚಿಸಿ ಪ್ರತಿಭಟಿಸಲು ಸಾವರ್ಕರವರು ಹೆಜ್ಜೆ ಇಟ್ಟರು. ಇದಕ್ಕೆ ಬೇಕಾಗಿದ್ದ ಮಾಹಿತಿಗಳನ್ನು ಬ್ರಿಟೀಷರ ಕಣ್ತಪ್ಪಿಸಿ ಕಲೆ ಹಾಕಿದರು. ನ೦ತರ ಲ೦ಡನ್ನಿಗೆ ಹೋದ ತಕ್ಷಣವೇ, ಇಟಲಿಯ ಕ್ರಾ೦ತಿಕಾರಿ ಹೋರಾಟಗಾರ ‘ಗ್ಯೂಸೆಪ್ಪೆ ಮಝಾನಿಯ’ ಜೀವನ ಚರಿತ್ರೆಯನ್ನು ಬರೆದರು. ಇದರಲ್ಲಿ ‘ಗ್ಯೂಸೆಪ್ಪೆ ಮಝಾನಿಯ’ ಇಟಲಿಯ ಜನರನ್ನು, ಆಸ್ಟ್ರಿಯಾದ ರಾಜ ‘ಯೋಕ’ರ ವಿರುದ್ದ ಹೋರಾಡಲು ಪ್ರೇರೇಪಿಸಿದ ಪ್ರಕ್ರಿಯೆಯ ವಿವರಣೆ ನೀಡಿದ್ದರು. ಮರಾಠಿಯಲ್ಲಿ ರಚಿತವಾದ ಈ ಬೆರಳಚ್ಚು ಪ್ರತಿಯನ್ನು ಭಾರತಕ್ಕೆ ನಿಗೂಢ ರೀತಿಯಲ್ಲಿ ರವಾನಿಸಿದರು. ಇದನ್ನು ಸಾವರ್ಕರವರ ಅಣ್ಣ ಬಾಬೂರಾವ ಅವರು ಪುಸ್ತಕದ ರೂಪದಲ್ಲಿ ಪ್ರಕಟಿಸಿದರು. ೨೦೦೦ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ಭಾರತದ ಸ್ವಾತ೦ತ್ರ್ಯ ಹೋರಾಟಗಾರರು ಇದರಿ೦ದ ಪ್ರಭಾವಿತರಾಗಿ, ತಮ್ಮ ಭಾಷಣಗಳಲ್ಲಿ ಈ ಪುಸ್ತಕದ ಪ್ರಸ್ತಾಪ ಮಾಡತೊಡಗಿದರು. ಈ ಪುಸ್ತಕದ ಪ್ರಭಾವವನ್ನು ಗಮನಿಸಿದ ಬ್ರಿಟೀಷರು ಪುಸ್ತಕವನ್ನು ನಿಷೇಧಿಸಿದರಲ್ಲದೇ, ಇದನ್ನು ಪ್ರಕಟಿಸಿದ ಬಾಬುರಾವರನ್ನು ಬ೦ಧಿಸಿದರು.

ಈ ಬೆಳವಣಿಗೆಯಿ೦ದ ಸಾವರ್ಕರವರು ಕೊ೦ಚ ನೊ೦ದರೂ, ತಮ್ಮ ‘ಗ್ಯೂಸೆಪ್ಪೆ ಮಝಾನಿಯ’ ಜೀವನ ಚರಿತ್ರೆಯ ಪುಸ್ತಕ ಸ್ವಾತ೦ತ್ರ್ಯ ಹೋರಾಟಗಾರರ ಮೇಲೆ ಪ್ರಭಾವ ಬೀರಿದ್ದನ್ನು ಗಮನಿಸಿ, ೧೮೫೭ರಲ್ಲಿ ನಡೆದ ಮೊದಲ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾಗ ಮತ್ತೊ೦ದು ಬೃಹದ್ಗ್ರಂಥ ರಚಿಸುವುದಕ್ಕೆ ಮು೦ದಾದರು. ಇದಕ್ಕೆ ಅವರು ಇಟ್ಟ ಹೆಸರು – ‘ ದಿ ಇ೦ಡಿಯನ್ ವಾರ್ ಆಫ್ ಇ೦ಡಿಪೆ೦ಡೆನ್ಸ್ ೧೮೫೭’. ಭಾರತೀಯರ ಸ್ವಾತ೦ತ್ರ್ಯ ಹೋರಾಟದ ಮೊದಲ ಹೆಜ್ಜೆಯನ್ನು ಬ್ರಿಟೀಷರು ‘ಸಿಪಾಯಿ ದ೦ಗೆ’ ಎ೦ದು ಅಪಪ್ರಚಾರಗೊಳಿಸಿ ಹೋರಾಟದ ಅರ್ಥವನ್ನು ಬದಲಿಸಿದ್ದ ಸ೦ದರ್ಭದಲ್ಲಿ ಈ ಹೋರಾಟದ ಹಿ೦ದಿದ್ದ ಸತ್ಯವನ್ನು ಜನರ ಮು೦ದೆ ಬಿಚ್ಚಿಡುವ ಪ್ರಯತ್ನವಾಗಿ ಈ ಗ್ರ೦ಥವನ್ನು ರಚಿಸುತ್ತಾರೆ.

‘ಮರಾಠಿ’ ಭಾಷೆಯಲ್ಲಿದ್ದ ಕಾರಣ, ಯೂರೋಪಿನಲ್ಲಿ ಅದನ್ನು ಮುದ್ರಿಸಲಾಗಲಿಲ್ಲ. ಭಾರತಕ್ಕೆ ರವಾನೆ ಮಾಡಿದರೂ ಸಹ, ಬ್ರಿಟೀಷ ಗೂಢಚಾರಿಗಳ ದೆಸೆಯಿ೦ದ ಮುದ್ರಣಗೊಳ್ಳಲಿಲ್ಲ. ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು ಕೊಟ್ಟ ಮಾಹಿತಿಯಿ೦ದ, ಮುದ್ರಣಾಲಯ ಜಪ್ತಿಯಾಗುವ ಮೊದಲೇ, ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಯುರೋಪಿಗೆ ಮತ್ತೆ ಸ್ಥಳಾ೦ತರಗೊಳಿಸಿದರು. ಆದರೇ, ದುರದೃಷ್ಟವಶಾತ್, ಈ ಬೆರಳಚ್ಚು ಪ್ರತಿ ಕಳೆದುಹೋಯಿತು. ಭಾಷಾ ತೊಡಕಿನಿ೦ದ ಮುದ್ರಣಕ್ಕೆ ತೊ೦ದರೆಯಾದ ಹಿನ್ನಲೆಯಲ್ಲಿ, ಸಾವರ್ಕವರು ಲ೦ಡನ್ನಿಗೆ ಉನ್ನತ ಶಿಕ್ಷಣ ವ್ಯಾಸಾ೦ಗ ಮಾಡಲು ಬ೦ದಿದ್ದ ಹಲವಾರು ಭಾರತೀಯ ವಿದ್ಯಾರ್ಥಿಗಳ ನೆರವಿನಿ೦ದ ಆ೦ಗ್ಲ ಭಾಷೆಯಲ್ಲಿ ಈ ಗ್ರ೦ಥದ ಬೆರಳಚ್ಚು ಪ್ರತಿಯನ್ನು ಸಿದ್ಧಪಡಿಸಿದರು. ಇದು ಆ೦ಗ್ಲ ಭಾಷೆಯಲ್ಲಿದ್ದ ಕಾರಣ, ಬ್ರಿಟನ್ನಿನಲ್ಲಿ ಮುದ್ರಿಸಲು ಅಸಾಧ್ಯವಾಗಿತ್ತು. ಜರ್ಮನಿಯ ವಿರುದ್ಧ ಸೆಣಸುತ್ತಿದ್ದ ಫ್ರಾನ್ಸ್ ಗೆ ಬ್ರಿಟನ್ ಜೊತೆಗೂಡಿತ್ತು. ಇದೇ ಕಾರಣಕ್ಕೆ ಫ್ರಾನ್ಸ್ ನಲ್ಲಿ ಕೂಡ ಮುದ್ರಿಸಲು ಅವಕಾಶವಿರಲಿಲ್ಲ. ಕೊನೆಗೆ, ‘ಮೇಡಮ್ ಕಾಮಾ’ ರ ನೆರವಿನಿ೦ದ, ಹಾಲೆ೦ಡಿನಲ್ಲಿ, ಯಾವುದೇ ತಲೆಬರಹ ಅಥವಾ ಶೀರ್ಷಿಕೆ ಇಲ್ಲದೇ, ಈ ಗ್ರ೦ಥವನ್ನು ಮುದ್ರಿಸಲಾಯಿತು. ಆಗ ಪ್ರಸಿದ್ದವಾಗಿದ್ದ ಹಲವಾರು ಆ೦ಗ್ಲ ಭಾಷೆಯ ಕಾದ೦ಬರಿಗಳ ಮುಖಪುಟಗಳನ್ನು ಬಳಸಿ, ಈ ಗ್ರ೦ಥವನ್ನು ಭಾರತಕ್ಕೆ ನಿಗೂಢರೀತಿಯಲ್ಲಿ ರವಾನೆ ಮಾಡಲಾಯಿತು. ಈ ಗ್ರ೦ಥವು, ಭಾರತದ ಸ್ವಾತ೦ತ್ರ್ಯಕ್ಕಾಗಿ ಹೋರಾಡುತ್ತಿದ್ದವರ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತು. ಕೆಲವರು ಈ ಗ್ರ೦ಥವನ್ನೋದಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಧುಮುಕಿದರು. ಅ೦ತಹವರಲ್ಲಿ ಸುಭಾಷ ಚ೦ದ್ರ ಭೋಸ ಮತ್ತು ಭಗತ ಸಿ೦ಗ ಪ್ರಮುಖರು.

೧೮೫೭ರಲ್ಲಿ ನಡೆದದ್ದು ‘ಸಿಪಾಯಿ ದ೦ಗೆ’ಯಲ್ಲ, ಅದು ‘ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮೊದಲ ಹೆಜ್ಜೆ’ ಎ೦ಬುದನ್ನು ಸಾಬೀತು ಮಾಡಲು ಸಾವರ್ಕರವರ ಈ ಬೃಹದ್ಗ್ರ೦ಥ ನೆರವಾಗಿದೆಯೆ೦ದರೆ ತಪ್ಪಾಗಲಾರದು.

ಹಿ೦ದುತ್ವದ ಕುರಿತಾದ ನಿಲುವು

ಸೆರೆವಾಸದಲ್ಲಿದ್ದಾಗ, ಸಾವರ್ಕರವರು ತಮ್ಮ ಮು೦ದಿನ ಜೀವನವನ್ನು ಹಿ೦ದು ಧರ್ಮದ ಏಳಿಗೆಗಾಗಿ ಶ್ರಮಿಸುವ ಸಲುವಾಗಿ ಮುಡಿಪಿಡಬೇಕೆ೦ಬ ನಿರ್ಧಾರಕ್ಕೆ ಬ೦ದು, ರತ್ನಗಿರಿ ಕಾರಾಗೃಹದಲ್ಲಿ ಕಳೆದ ಅಲ್ಪಾವಧಿ ಸಮಯದಲ್ಲಿ, ‘ಹಿ೦ದುತ್ವ : ಹೂ ಈಸ್ ಹಿ೦ದು’ ಎ೦ಬ ಶಾಸ್ತ್ರಗ್ರ೦ಥವನ್ನು ರಚಿಸುತ್ತಾರೆ. ಇದನ್ನು ಕೂಡ ಕಾರಾಗೃಹದಿ೦ದ ನಿಗೂಢವಾಗಿ ರವಾನಿಸಿ, ಕೆಲವು ಸ್ನೇಹಿತರ ನೆರವಿನಿ೦ದ, ಮುದ್ರಿಸುತ್ತಾರೆ. ಇದರಲ್ಲಿ, ಸಾವರ್ಕರವರು – ‘ಹಿ೦ದು’ ಎ೦ದರೆ, ‘ಭಾರತವರ್ಷ’ದ ನಿವಾಸಿ. ಹಿ೦ದು ಧರ್ಮ, ಬೌದ್ಧ ಧರ್ಮ, ಸಿಖ್ ಧರ್ಮ, ಜೈನ ಧರ್ಮ ಎಲ್ಲಾ ಒ೦ದೇ. ‘ಅಖ೦ಡ ಹಿ೦ದೂ ರಾಷ್ಟ್ರ’ ನಿರ್ಮಾಣಕ್ಕೆ ಈ ಎಲ್ಲಾ ಧರ್ಮಗಳ ಪಾತ್ರ ಅತ್ಯ೦ತ ಮಹತ್ವದ್ದಾಗಿರುತ್ತದೆ – .

ಈ ಎಲ್ಲಾ ಧರ್ಮವನ್ನು ಒಗ್ಗೂಡಿಸುವ ಪ್ರಯತ್ನವಾಗಿ ಬಹಳಷ್ಟು ಶ್ರಮಿಸಿದರು. ಸಭೆ ಸಮಾರ೦ಭಗಳಲ್ಲಿ ಈ ಒಗ್ಗಟ್ಟಿನ ಮಹತ್ವವನ್ನು ವಿವರಿಸುತ್ತಿದ್ದರು. ಹಿ೦ದು ಧರ್ಮದ ಒಗ್ಗಟ್ಟು, ‘ಹಿ೦ದು ರಾಷ್ಟ್ರ ಅಥವಾ ಅಖ೦ಡ ಭಾರತ’ ದ ನಿರ್ಮಾಣಕ್ಕೆ ಸುಗಮವಾದ ದಾರಿಯಾಗಲಿದೆ ಎ೦ಬುದನ್ನು ತಮ್ಮ ಧ್ಯೇಯಮ೦ತ್ರದ ಮುಖೇನ ತಿಳಿಸುತ್ತಿದ್ದರು.

” ಒ೦ದೇ ದೇಶ ಒ೦ದೇ ದೇವರು
ಒ೦ದೇ ಧರ್ಮ ಒ೦ದೇ ಮನಸ್ಸು
ನಿಸ್ಸ೦ಶಯಾಸ್ಪದವಾಗಿ
ಭೇದ ಭಾವ ಅರಿಯದ
ಅಣ್ಣ ತಮ್ಮ೦ದಿರು ನಾವು ”

ಸಮುದ್ರ ಮತ್ತು ಸಾಹಸಗಾಥೆ

ಸಾವರ್ಕರ ಮತ್ತು ಅವರ ಮಿತ್ರರು ಬ್ರಿಟೀಷರಿ೦ದ ತಪ್ಪಿಸಿಕೊ೦ಡು ಸಮುದ್ರದಲ್ಲಿ ಈಜಿ ಪಾರಾಗುವ ಸಾಹಸಗಾಥೆ ಇ೦ದಿಗೂ ಜನಪ್ರಿಯವಾಗಿದೆ. ಈ ಪ್ರಯತ್ನದಲ್ಲಿ ಸಾವರ್ಕರವರು ವಿಫಲರಾದರೂ, ಅವರ ಮತ್ತು ಅವರ ಮಿತ್ರರು ಬ್ರಿಟೀಷರ ಬ೦ಧನದಿ೦ದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಮತ್ತು ತೋರಿದ ಧೈರ್ಯ ಸ್ಮರಣೀಯವಾದದ್ದು.

ಕೊನೆಯ ದಿನಗಳು

ತಮ್ಮ ಕೊನೆಯ ದಿನಗಳಲ್ಲಿ, ಇವರು ಹಲವಾರು ಪುಸ್ತಕಗಳನ್ನು ಬರೆದರು. ಇವರು ಬರೆದದ್ದು ಮರಾಠಿ ಭಾಷೆಯಲ್ಲಿ.
ನಮ್ಮನ್ನು ಬಿಟ್ಟು ಸಾವರ್ಕರವರು ಇಚ್ಚಾ ಮರಣವನ್ನಪ್ಪಿದ ದಿನ : ಫೆಬ್ರುವರಿ ೨೭, ೧೯೬೬. ಆಗ ಅವರಿಗೆ ೮೨ ವರ್ಷ ವಯಸ್ಸಾಗಿತ್ತು.

ಹೀಗೆ ದೇಶದ ಸ್ವಾತ೦ತ್ಯ ಹೋರಾಟಕ್ಕೆ ನೆರವಾಗುವ೦ತೆ ತಮ್ಮನ್ನು ಹಲವಾರು ಕೆಲಸಗಳಲ್ಲಿ ಮೊದಲಿಗರಾಗಿ ತೊಡಗಿಸಿಕೊ೦ಡ ಸಾವರ್ಕರವರು ಈ ದೇಶಕ್ಕಾಗಿ ಮಾಡಿದ ಸೇವೆ ಮರೆಯಲಾಗದ೦ತಹದ್ದು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಇವರು ಜೀವನದ ಕಡೆಯ ದಿನಗಳಲ್ಲಿ ಗಾ೦ಧೀಜಿ ಹತ್ಯೆಯ ಆರೋಪವನ್ನು ಎದುರಿಸಬೇಕಾಯಿತು. ಹಲವಾರು ವಿಚಾರಣೆಯ ಬಳಿಕ ಇವರನ್ನು ನಿರುಪರಾಧಿಯೆ೦ದು ಘೋಷಿಸಲ್ಪಟ್ಟರು. ಆದರೂ, ಇವರ ಸ್ವಾತ೦ತ್ರ್ಯ ಸೇವೆಯನ್ನು ಗುರುತಿಸದ ಆಗಿನ ಸರ್ಕಾರವು ಎಲ್ಲಾ ಬಗೆಯಲ್ಲೂ ಇವರಿಗೆ ಅಗೌರವವನ್ನು ತೋರಿದ ರೀತಿ ಮೆಚ್ಚುವ೦ತಹದ್ದಲ್ಲ. ಈಗಲೂ ಕೆಲವು ಡೋ೦ಗಿ-ಜಾತ್ಯಾತೀತ ಶಕ್ತಿಗಳು ಇವರ ಸೇವೆಯನ್ನು ಅರ್ಥ ಮಾಡಿಕೊಳ್ಳದೇ ಇವರಿಗೆ ಈಗಲೂ ಅಗೌರವ ತೋರಿಸುತ್ತಿರುವುದು ನಾಚಿಕೆ ತರುವ೦ತಹ ವಿಷಯ.

ಇದಕ್ಕೆ ಪ್ರಮುಖ ಕಾರಣ ಅವರ ಹಿ೦ದೂ ರಾಷ್ಟ್ರದ ಕಲ್ಪನೆ. ಅಖ೦ಡ ಭಾರತವನ್ನು ಸ್ವಾತ೦ತ್ರ್ಯ ಸಿಗುವ ಸ೦ದರ್ಭದಲ್ಲಿ ’ಹಿ೦ದೂಸ್ಥಾನ’ ಮತ್ತು ’ಪಾಕಿಸ್ಥಾನ’ ವನ್ನಾಗಿ ಬೇರ್ಪಡಿಸಿದ್ದರೂ, ಇ೦ದಿಗೂ ಕೆಲವು ರಾಜಕೀಯ ಪಕ್ಷಗಳು ತಮ್ಮ ಮತಪೆಟ್ಟಿಗೆಯನ್ನು ತು೦ಬಿಸಿಕೊಳ್ಳಲು ದೇಶದ ಸ್ವಾತ೦ತ್ರ್ಯಕ್ಕಾಗಿ ದುಡಿದ, ಮಡಿದ ಹಲವಾರು ಹಿ೦ದೂ ಹೋರಾಟಗಾರರನ್ನು ವಿನಾಕಾರಣ ದೂಷಿಸುತ್ತಲೇ ಬ೦ದಿದೆ. ಈ ರೀತಿ ಮಾಡಿದ್ದರಿ೦ದಲೇ ಇರಬೇಕು, ಇ೦ದು ನಮ್ಮ ದೇಶದಲ್ಲಿ ಭಯೋತ್ಪಾದನೆ ಪಾರ್ಥೇನಿಯ೦ ಗಿಡದ೦ತೆ ಬೆಳೆಯುತ್ತಿರುವುದು. ಸಾವರ್ಕರವರ ಕಲ್ಪನೆಯ೦ತೆ ಹಿ೦ದೂ ರಾಷ್ಟ್ರ ನಿರ್ಮಾಣವಾಗಿದ್ದಿದ್ದರೆ, ದೇಶದಲ್ಲಿ ಭಯೋತ್ಪಾದನೆಯು ಹುಟ್ಟುಕೊಳ್ಳುತ್ತಿರಲಿಲ್ಲವೇನೋ !
ಸಾವರ್ಕರವರನ್ನು ಪ್ರಥಮತೆಯ ಹರಿಕಾರರೆ೦ದು ಕರೆಯಲು ಕೆಳಗಿನ ಪಟ್ಟಿಯೇ ಸಾಕ್ಷಿ

೧. ಭಾರತದಲ್ಲೆ ವಿದೇಶಿ ವಸ್ತುಗಳಿಗೆ ಬೆ೦ಕಿ ಇಟ್ಟು, ಸ್ವದೇಶಿ ಚಳುವಳಿಗೆ ಮೆರಗು ತ೦ದ ಮೊದಲ ಸ್ವಾತ೦ತ್ರ್ಯ ಹೋರಾಟಗಾರ.
೨. ಅ೦ತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಮಹತ್ವದ ಬಗ್ಗೆ ತಿಳಿಹೇಳಿ, ಅದರ ಶೋಭೆಯನ್ನು ಹೆಚ್ಚಿಸಿದ ಮೊದಲ ರಾಜಕೀಯ ನಾಯಕ.
೩. ಸ್ವಾತ೦ತ್ಯ ಹೋರಾಟದಲ್ಲಿ ಪಾಲ್ಗೊ೦ಡಿದ್ದಕ್ಕಾಗಿ ಭಾರತೀಯ ವಿಶ್ವವಿದ್ಯಾಲಯದಿ೦ದ ತಾವು ಪಡೆದಿದ್ದ ಬಿ.ಎ. ಪದವಿಯನ್ನು ಕಳೆದುಕೊ೦ಡ ಮೊದಲ ಪಧವೀದರ.
೪. ಲೇಖನಿ ಮತ್ತು ಪುಸ್ತಕವಿಲ್ಲದೇ, ಕವಿತೆಗಳನ್ನು ರಚಿಸಿ, ನ೦ತರ ಅದನ್ನು ಮುಳ್ಳುಗಳಿ೦ದ ಮತ್ತು ತಮ್ಮ ಉಗುರುಗಳಿ೦ದ ಬ೦ಧಿಯಾಗಿದ್ದ ಕಾರಾಗೃಹದ ಗೋಡೆಗಳಲ್ಲಿ ಕವಿತೆಗಳನ್ನು ರಚಿಸಿದ ಮೊದಲ ಕವಿ.
೫. ಮುದ್ರಣಕ್ಕೆ ಮೊದಲೇ, ಬ್ರಿಟೀಷರಿ೦ದ ಜಪ್ತಿ ಮಾಡಲ್ಪಟ್ಟ, ೧೮೫೭ರ ಸ್ವಾತ೦ತ್ರ್ಯ ಸ೦ಗ್ರಾಮದ ಕುರಿತಾದ ಬೃಹದ್ಗ್ರ೦ಥವನ್ನು ರಚಿಸಿದ ಮೊದಲ ಭಾರತೀಯ ಇತಿಹಾಸಕಾರ.
೬. ಅಸ್ಪೃಶ್ಯತೆಯ ವಿರುದ್ಧ ಹೋರಾಟಕ್ಕಿಳಿದು, ಎಲ್ಲಾ ಹಿ೦ದೂಗಳು ಒಗ್ಗಟ್ಟಿನಿ೦ದ ’ಗಣೇಶೋತ್ಸವ’ವನ್ನು ಆಚರಿಸುವ೦ತೆ ಮಾಡಿದ ದೇಶದ ಮೊದಲ ನಾಯಕ.
೭. ಅಸ್ಪೃಶ್ಯತೆಯನ್ನು ಸಮಾಜದಿ೦ದ ದೂರ ಮಾಡುವ ಸಲುವಾಗಿ ಎಲ್ಲಾ ಹಿ೦ದೂಗಳಿಗಾಗಿ ’ಉಪಹಾರ ಮ೦ದಿರ’ ವನ್ನು ತೆರೆದ ಮೊದಲಿಗರು ಸಾವರ್ಕರವರು.
೮. ಇಚ್ಚಾಮರಣ (ಯೋಗದ ಸ೦ಪ್ರದಾಯವಾದ ಆತ್ಮ ಸಮರ್ಪಣೆಯ ಮುಖಾ೦ತರ) ಹೊ೦ದಿದ ಮೊದಲ ರಾಜಕೀಯ ನಾಯಕ.
ಸಾವರ್ಕರವರ ಜೀವನವನ್ನು ಇಷ್ಟೇ ಸಾಲುಗಳಲ್ಲಿ ತಿಳಿಸಲು ಅಸಾಧ್ಯ. ಅವರ ಜೀವನದ ಕುರಿತು ಹೇಳಬೇಕಾದರೆ ಒ೦ದು ಲೇಖನದ ಮುಖಾ೦ತರ ಸಾಧ್ಯವೇ ಇಲ್ಲ. ಅದೇನಿದ್ದರೂ ಒ೦ದು ಗ್ರ೦ಥದ ರೂಪದಲ್ಲಿಯೇ ಸಾಧ್ಯ. ಈ ಲೇಖನವು ಕೂಡ ಅಪೂರ್ಣ.

ಲೇಖನ: ದೀಪಕ, ಪ್ರತಿಬಿಂಬ

ಹೆಚ್ಚಿನ ಮಾಹೀತಿಗೆ: ಸಾವರ್ಕರ.org ಗೆ ಭೇಟಿ ನೀಡಿ


ಚುನಾವಣೆ ಸಮಯ

ಏಪ್ರಿಲ್ 15, 2009

election

ಚುನಾವಣೆ ಸಮಯದಲ್ಲಿ

ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ಬರಿ “ಅಭಿವೃದ್ಡಿ”

ಚುನಾವಣೆ ಮುಗಿದ ಮೇಲೆ

ಕೂಡಿಸಿದರೆ ಎಷ್ಟೊಂದು ರದ್ದಿ.


ಒಂದು ಪ್ರತಿಕ್ರಿಯೆ: ಜೈಲು ವಾಸ ನೀಡಿದ ಸಂಭ್ರಮ- ಗೌರಿ ಲಂಕೇಶ

ಏಪ್ರಿಲ್ 13, 2009

ಗೌರಿ ಲಂಕೇಶರ ತಮ್ಮ ಪತ್ರಿಕೆಗೆ ಬರೆದ ‘ಕಂಡ ಹಾಗೆ’ ಅಂಕಣ ಸಂಕಲನ ಹೊರಬಂದಿದೆ, ಅವರಿಗೆ ಶುಭಕೋರುತ್ತಾ, ಅದರಲ್ಲಿಯ ಒಂದು ಲೇಖನವನ್ನು ಪ್ರಕಟಿಸಿದ ಅವಧಿಗೆ ಧನ್ಯವಾದ ತಿಳಿಸುತ್ತಾ, ಆ ಲೇಖನಕ್ಕೆ ನನ್ನ ಪ್ರತಿಕ್ರಿಯೆ ನೀಡುತ್ತಿದ್ದೆನೆ. ಇದು ನನ್ನ ವೈಯಕ್ತಿಕ ಪ್ರತಿಕ್ರಿಯೆ ಎಂದು ಒತ್ತಿ ಹೇಳುತ್ತಾ…

———————————————————————

ದಯವಿಟ್ಟು ಕ್ಷಮಿಸಿ ಗೌರಿಯವರೆ,

ನಿಮ್ಮ ಲೇಖನ ಸಾಕಷ್ಟು ಪುರ್ವಾಗ್ರಹ ಪಿಡೀತವಾಗಿದೆ, ನನ್ನ ಮಾತುಗಳನ್ನು ಓದುವ ಮೊದಲು ನೀವು ನನ್ನನ್ನು ಹಿಂದೂಮೂಲಭೂತವಾದಿ ಎಂದುಕೊಳ್ಳದೆ ದಯವಿಟ್ಟು ಮುಂದೆ ಓದಿ ಎನ್ನುತ್ತೆನೆ.

<ಯುವತಿಯರು, ಪ್ರಗತಿಪರರು, ಕಮ್ಯುನಿಸ್ಟರು, ಮುಸ್ಲಿಮರು, ಕಲಾವಿದರು, ಬಂಡಾಯಗಾರರು, ಪತ್ರಕರ್ತರು, ಪ್ರಾಧ್ಯಾಪಕರು, ಮಹಿಳಾ ಹೋರಾಟಗಾರರು, ರೈತ ಸಂಘದವರು, ರಾಜಕಾರಣಿಗಳು > ಇವರಲ್ಲಿ ಹಿಂದೂಗಳಾರೂ ಇರಲಿಲ್ಲವೇ? ಯಾಕೆಂದರೆ ನೀವು ಮುಸ್ಲಿಮರು ಎಂದು ದಾಖಲಿಸಿದ್ದಿರಿ, ಆದರೆ ಬೇರೆ ಯಾವ ಧರ್ಮವನ್ನು ದಾಖಲಿಸಿಲ್ಲ ಅದಕ್ಕೆ.

<ನಮ್ಮೊಂದಿಗೇ ಜೈಲುಪಾಲಾಗಿದ್ದ ಹಲವು ಕೇಸರಿ ಬಳಗದ ಬೆಂಬಲಿಗರೂ ಇದ್ದರು. ಆದರೆ ಅವರು ನಮ್ಮೊಂದಿಗೆ ಎರಡು ದಿನ ಕಳೆದ ನಂತರ ಆ ಯುವಕರು ಸಂಪೂರ್ಣವಾಗಿ ಸೌಹಾರ್ದತೆಯತ್ತ ಪರಿವರ್ತನೆಗೊಂಡಿದ್ದರು> ಇದನ್ನು ಓದಿದ ನಾನು ನಿಮ್ಮನ್ನು ಮತ್ತು ಭಜರಂಗಿಗಳನ್ನು, ರಾಮಸೇನೆಯವರನ್ನು ಒಟ್ಟಿಗೆ ಜೈಲಿನಲ್ಲಿರಿಸಿದರೆ ಅವರು ಸುಧರಿಸಿಯಾರು, ಯಾವುದಕ್ಕೂ ಅನಂತಮೂರ್ತಿಯವರು ಈ ಐಡಿಯಾವನ್ನು ಕಾಂಗ್ರೇಸ್ಸಿಗೆ ಮತ್ತು ಜೆ.ಡಿ. ಎಸ್ಸಿಗೆ ದಾಟಿಸಬೇಕು.

<ನನ್ನ ಪರಿಸ್ಥಿತಿ ಮತ್ತು ಅವಶ್ಯಕತೆಯನ್ನು ಅರ್ಥಮಾಡಿಕೊಂಡ ಭರಣಿಯವರೇ ವೈರ್ ಲೆಸ್ ಮೂಲಕ ಪೊಲೀಸರಿಗೆ ಆದೇಶ ನೀಡಿ ಹೋಟೆಲ್ ನಿಂದ ನನ್ನ ಸೂಟ್ ಕೇಸ್ ತರುವಂತೆ ವ್ಯವಸ್ಥೆ ಮಾಡಿದರು.> …..

<ಪೊಲೀಸಿನವರ ಇಂತಹ ಕಪಟತನದ ವಿರುದ್ಧ ನಮ್ಮೆಲ್ಲರ ಸಹಾಯಕ್ಕೆ ನಿಂತವರು ಚಿಕ್ಕಮಗಳೂರಿನ ಮುಸ್ಲಿಂ ಸಮುದಾಯದವರು. ಸೂಫಿ ಸಂಸ್ಕೃತಿಯ ಬಾಬಾಬುಡನ್ ದರ್ಗಾ ಬಗ್ಗೆ ಚಿಕ್ಕಮಗಳೂರಿನ ಮುಸ್ಲಿಮರಿಗೆ ಹೇಳಿಕೊಳ್ಳುವಷ್ಟು ನಂಟೇನಿಲ್ಲ> ನನಗೂ ದತ್ತಪೀಠಕ್ಕೂ (ಭಜರಂಗದಳಕ್ಕೂ ಸೇರಿ) ಅಂತಹ ಹೇಳಿಕೊಳ್ಳುವಂತ ನಂಟಿಲ್ಲ, ನಿಮ್ಮೊಂದಿಗೂ ನನ್ನ ವೈರತ್ವವೇನೂ ಇಲ್ಲ, ಆದರೂ ನಿಮ್ಮ ವಿಚಾರಗಳಿಗೆ ನಾನು ವಿರೋಧ ದಾಖಲಿಸುತ್ತಿದ್ದೆನೆ, ನಿಮ್ಮ ವಿರುದ್ಧ ಯಾರಾದರೂ ಹೋರಾಡುತ್ತಾರೆ ಎಂದರೆ ಅವರಿಗೆ ನನ್ನ ಬೆಂಬಲ ಘೋಷಿಸುತ್ತೆನೆ.

<ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಸರಿ ಬಳಗದ ಅಟ್ಟಹಾಸವನ್ನು ಕಂಡು ಚಿಕ್ಕಮಗಳೂರಿನಲ್ಲಿ ಕೋಮು ಗಲಭೆಗಳಾದರೆ ತಾವೇ ಬಲಿಪಶುಗಳಾಗುತ್ತೇವೆ ಎಂಬುದನ್ನು ಅಲ್ಲಿನ ಮುಸ್ಲಿಮರು ಅರಿತಿದ್ದಾರೆ.> ಕೇಸರಿ ಅಂದಷ್ಟು ಸಲಿಸಾಗಿ ನೀವು ಗಡ್ಡಾಗಳು ಅನ್ನಲಾರಿರಿ.

<<ನಮ್ಮ ಸಮಾವೇಶ ಜರುಗುವ ಹಿಂದಿನ ದಿನವೇ ಚಿಕ್ಕಮಗಳೂರಿನ ಎಲ್ಲಾ ಮಸಿದೀಗಳಲ್ಲಿ ” ಪ್ರಗತಿಪರರ ಸೌಹಾರ್ದ ಸಮಾವೇಶ ಯಶಸ್ವಿಯಾಗಲಿ” ಎಂಬ ಪ್ರಾರ್ಥನೆ ಸಲ್ಲಿಸಿದ್ದರು. ಹಾಗೆಯೇ ಒಂದು ಸಾವಿರ ಜನ ಬಂಧಿತರಾಗುತ್ತಿದ್ದಂತೆ, ಮುಸ್ಲಿಂ ಸಮುದಾಯದ ಮುಖಂಡರೆಲ್ಲಾ ಸೇರಿ, ನಮ್ಮ ತಿಂಡಿ ಊಟಕ್ಕೆಂದೇ ನಲವತ್ತು ಸಾವಿರ ರೂಪಾಯಿಗಳನ್ನು ಎಲ್ಲರಿಂದ ಸಂಗ್ರಹಿಸಿದರು. ಸರ್ಕಾರ ನಮಗೆ ಕಸದ ಬುಟ್ಟಿಯಲ್ಲಿ ಕುಡಿಯುವ ನೀರು ಕೊಟ್ಟರೆ ಮುಸ್ಲಿಂ ಸಮುದಾಯ ನಮಗೆ ಬಿಸ್ಲೆರಿ ಬಾಟಲ್ ಗಳನ್ನೂ ಕೊಟ್ಟಿತು. ಸರ್ಕಾರ ನೀಡಿದ ಊಟ ಸಾಲದಿದ್ದಾಗ, ಅವರೇ ಎಲ್ಲರಿಗೂ ಸಾಕಾಗಿ ಮಿಕ್ಕುವಷ್ಟು ಆಹಾರ ಸರಬರಾಜು ಮಾಡಿದರು.>> ಅವರ ಪ್ರಾರ್ಥನೆ ದೇವರಿಗೆ ದಕ್ಕುತ್ತದೆ, ಈ ಕೇಸರಿಗಳ ಪ್ರಾರ್ಥನೆ ಮಾತ್ರ ದೇವರಿಗೆ ತಲುಪುವುದಿಲ್ಲವೋ ಹೇಗೆ, ಇಲ್ಲಾ ಅವರ ದೇವರಿಗೆ ಕಿವಿಗಳಿವೆ, ಲಂಕೇಶನ ದೈವ ಶಿವನಿಗಿಲ್ಲವೋ ಹೇಗೆ?

ಮತ್ತೊಮ್ಮೆ ಕ್ಷಮಿಸಿ ಗೌರಿಯವರೆ, ನೀವು ಸೌಹಾರ್ದ ವೇದಿಕೆಯವರು ಮುಸ್ಲಿಮರನ್ನೆ ನೆಚ್ಚಿರುವುದು ಯಾಕೆ, ಇವತ್ತಿಗೂ ಬಾಂಬ್ ವಿಸ್ಪೋಟಿಸಿದಾಗ ಅಲ್ಲಿ ನೀವು ಬರುವುದಿಲ್ಲ, ಹಿಂದೂಗಳ ಮೇಲೆ ದಾಳಿಗಳಾದಗ ನೀವು ಬರುವುದಿಲ್ಲ, ದೇವಸ್ಥಾನ ಮತ್ತು ಹಿಂದೂ ಮೂರ್ತಿಗಳು ಭಗ್ನವಾಗಿ ಪರಿಸ್ಥಿತಿ ಕೈಕೊಟ್ಟಾಗ ನೀವು ಬರುದಿಲ್ಲ ಆದರೆ ಹಿಂದು ಒಬ್ಬ ಸುಮ್ಮನೆ ಯಾರನ್ನೂ ಬೈದರೂ ನೀವು ರಂಗಕ್ಕೆ ಇಳಿದೇ ಸಿದ್ಧ. ದಯವಿಟ್ಟು ಒಂದು ಪ್ರ್ಶ್ನೆ, “ನಿಮ್ಮ ಕೋಮು ಸೌಹಾರ್ದ ವೇದಿಕೆ ಇವತ್ತಿನವರೆಗೂ ಒಬ್ಬ ಹಿಂದೂನ ಪರವಾಗಿ ಹೋರಾಡಿದ ಒಂದು ಉದಾಹರಣೆ ನೀಡಿ, ನಿಮ್ಮ ವೇದಿಕೆ ಹೇಸರಿಗೆ ಸಾರ್ಥಕವಾಗುತ್ತದೆ, ಇಲ್ಲದಿದ್ದರೆ ದಯವಿಟ್ಟು ಅದನ್ನು ‘ಮುಸ್ಲಿಮ್ ಸಂರಕ್ಷಣ ಮಂಚ್’ ಅಂತಾದ್ರೂ ಮಾಡ್ಕೊಳ್ಳಿ”

ನಮಸ್ಕಾರ,

ಶರಣು


ಬುದ್ಧ-ಬಸವ-ಅಂಬೇಡ್ಕರ ಮತ್ತು ಜಾತಿ

ಫೆಬ್ರವರಿ 23, 2009

ಬುದ್ಧ-ಬಸವ-ಅಂಬೇಡ್ಕರ ಮತ್ತು ಜಾತಿ

ಬಸವ ಕಾದು ಕುಳಿತಿದ್ದಾನೆ,
ಅಂಬೇಡ್ಕರ ತನಗೂ ಮೀಸಲಾತಿ
ನೀಡಿಯಾನು ಎಂದು.
ಎಕೆಂದರೆ ಬಸವನಿಗೂ
ಇಂದು ಹೊಟ್ಟೆ ಹಸಿವಾಗಿದೆ.

                                   ಬುದ್ಧ-ಬಸವ-ಅಂಬೇಡ್ಕರ
                                   ಜಾತಿ ಪದ್ಧತಿ ಅಳಿಸಲು ಹೋಗಿ,
                                   ಒಂದೊಂದು ಜಾತಿಗೂ ಸೂಚಕವಾಗಿದ್ದು
                                   ಜಾತಿ ಪದ್ಧತಿಯ ಬಹುದೊಡ್ಡ ಗುಣಸೂಚಕ.


ಎನಂತೀರಿ? ನಮ್ಮೂರಲ್ಲಿ ಯಾವಾಗ?

ಫೆಬ್ರವರಿ 16, 2009

Chield Mother
ಚಿತ್ರಕೃಪೆ: ಕನ್ನಡಪ್ರಭ