ನಮ್ಮ ಬುದ್ದಿಜೀವಿಗಳೇಕೆ ಹೀಗೆ? ಒಂದು ಪ್ರತಿಕ್ರಿಯೆ

ಜನವರಿ 15, 2010

ಮೊದಲಿಗೆ ಕೆಂಡಸಂಪಿಗೆ ಮತ್ತೆ ಅರಳಿದ್ದಕ್ಕೆ ಅಭಿನಂದನೆಗಳು.

ನನ್ನ ಈ ಲೇಖನ ಕೆಂಡಸಂಪಿಗೆಯಲ್ಲಿ ಪ್ರಕಟಿತ ಪ್ರೊ.ಕಿ.ರಂ.ನಾಗರಾಜರ “ಸಂಕ್ರಾಂತಿಯ ನೆಪದಲ್ಲಿ ಕಿರಂ ಸಿಟ್ಟು” ಲೇಖನಕ್ಕೆ ಒಂದು ಸಣ್ಣ ಪ್ರತಿಕ್ರಿಯೆ.

ಈ ಲೇಖನದ ಮೂಲ ಆಶಯವನ್ನು ಲೇಖನದ ತಲೆಬರಹ ಸೂಕ್ಷ್ಮವಾಗಿ ಹಿಡಿದಿಟ್ಟಿದೆ, ಇಲ್ಲಿ ಸಂಕ್ರಾಂತಿ ಕೇವಲ ನೆಪ, ಮೂಲ ಉದ್ದೇಶ ಕರ್ನಾಟಕ ರಾಜ್ಯ ಸರ್ಕಾರವನ್ನು ಬೈಯುವುದಾಗಿದೆ, ಸರ್ಕಾರವನ್ನು ಬೈಯುದರ ಮೂಲಕ ಬಿ.ಜೆ.ಪಿ.ಯನ್ನು ಬೈಯುವುದಾಗಿದೆ (ನನಗರ್ಥವಾದಂತೆ). ಲೇಖನದಲ್ಲಿ ಲೇಖಕರು “ಜನ, ಮಾಧ್ಯಮಗಳು, ಉದ್ಯಮಿಗಳು, ಕೇಂದ್ರ ಸರ್ಕಾರ… ಹೀಗೆ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರು. ಆದರೆ ರಾಜ್ಯದ ಬಿಜೆಪಿ ಸರ್ಕಾರ ತನಗೂ ನೆರೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ.” ಎಂದು ಬರೆದಿದ್ದಾರೆ, ಈ ಸಾಲನ್ನು ಓದಿದಾಗ ನನಗೆ ಈ ಲೇಖನ ಕಾಂಗ್ರೇಸ್ ಕೃಪಾಪೋಶಿತ ಎಂದೆನೆಸುತ್ತಿದೆ (ಹಾಗೆಯೇ ನನ್ನ ಪ್ರತಿಕ್ರೀಯೆ ಬಿಜೆಪಿ ಕೃಪಾಪೋಶಿತ ಎಂದೆನೆಸುತ್ತಿರಬಹುದು), ಕೇಂದ್ರ ಸರ್ಕಾರ ಕರ್ನಾಟಕದ ನೆರೆ ಪರಿಹಾರಕ್ಕೆ ಕೊಟ್ಟ ಮೊತ್ತ, ಅಂದ್ರಕ್ಕೆ ಕೊಟ್ಟ ಮೊತ್ತ, ಕರ್ನಾಟಕದಲ್ಲಿ ಮತ್ತು ಆಂದ್ರದಲ್ಲಿ ನೆರೆಯಿಂದಾದ ನಾಶ ಎರಡರ ವಿಸ್ತೃತ ಹೋಲಿಕೆ ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ಬಂದಿತ್ತು, ತಾವು ಗಮನಿಸಿದ್ದಿರಿ ಎಂದುಕೊಳ್ಳುತ್ತೆನೆ.

ಕರ್ನಾಟಕದ ಹಿಂದಿನ ಯಾವ ಸರ್ಕಾರಗಳು ಮಾಡದಷ್ಟು ಅಭಿವೃದ್ಧಿ ಕೆಲಸಗಳು “ಉತ್ತರ ಕರ್ನಾಟಕ”ದಲ್ಲಿ ಈಗ ನೆಡೆದಿವೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ನನಗೆ ವೃತ್ತ ಪತ್ರಿಕೆಗಳನ್ನು ಓದಿ ತಿಳಿಯಬೇಕಾಗಿಲ್ಲ, ಬರಿ ನೆಡೆದಿರುವ ಬದಲಾವನೆಗಳನ್ನು ಗಮನಿಸಿದರೆ ಸಾಕು. ಒಂದೆ ಉದಾಹರಣೆಯೆಂದರೆ ಬಾಗಲಕೋಟೆಯಂತ ಒಂದು ಜಿಲ್ಲಾ ಕೆಂದ್ರದಲ್ಲಿ ಫ್ಲೈ ಒವರ್ ನಿರ್ಮಾಣ, ಗದಗ-ಬಿಜಾಪುರ ಬ್ರಾಡಗೇಜ ಕಾರ್ಯಾರಂಭ ಮಾಡಿದ್ದು, ಅನೇಕ ರಸ್ತೆಗಳ ಉತ್ತಮ ಮರು ನಿರ್ಮಾಣ, ಉತ್ತರ ಕರ್ನಾಟಕದ ಅನೇಕ ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಕಣ್ಣಿಗೆ ರಾಚುವಂತಿವೆ.

ಆಸರೆ ಮನೆಗಳು (ಮೈಸೂರು ನಗರಿಕರ ವೇದಿಕೆ)

ಇನ್ನು ಲೇಖಕರು ನೆರೆ ಬಲಿಯಾದವರ ಬಗ್ಗೆ ಬರೆದಿದ್ದಾರೆ, ಸ್ವಾಮಿ ನನ್ನುರು ನೆರೆಗೆ ಬಲಿಯಾದದ್ದೆ, ಊರಿನ ಸ್ಥಳಾಂತರಕ್ಕೆ ಹಲವಾರು ವರ್ಷಗಳಿಂದ ಕೂಗಿದ್ದರು ನಮ್ಮನ್ನು ಸ್ಥಳಾಂತರಿಸಲು ಈ ಯಡಿಯೂರಪ್ಪನೆ ಮುಖ್ಯವಂತ್ರಿಯಾಗಬೇಕಾಯಿತು, ಯಾಕೆಂದರೆ ನನ್ನೂರ ಜನ ಮಂಡ್ಯದಂತೆ ನಾಲೆಯ ಬದಿಯಲ್ಲಿ ಕಬ್ಬು ಬೆಳೆಯುವವರಲ್ಲ, ನನ್ನೂರು ಹಾಸನ, ಹೋಳೆನರಸಿಂಹಪುರ ಅಥವಾ ರಾಮನಗರ ಹೋಬಳಿಯಲಿಲ್ಲ, ನನ್ನೂರ ಬಳಿ ಕಾವೇರಿ ಹರಿದಿಲ್ಲ, ಹರಿದವಳು ಕೃಷ್ಣೆ, ಮಲಪ್ರಭೆ ಇವುಗಳ ಬಗ್ಗೆ ನ್ಯಾಯಾಧಿಕರಣ ರಚನೆಗೊಂಡರೆ ಬೆಂಗಳೂರಲ್ಲಿ ಯಾರಿಗೂ ಗೋತ್ತಿಲ್ಲ, ಈ ನ್ಯಾಯಾಧಿಕರಣಗಳಿಂದ ನಮಗೆ ಅನ್ಯಾಯವಾದರೂ ಬೆಂಗಳೂರು ಯಾವತ್ತು ಪ್ರತಿಭಟಿಸಿಲ್ಲ.

ನನ್ನೂರು ಈಗ ಅಭಿವೃದ್ಧಿ ಕಾಣುತ್ತಿದೆ, ನನ್ನೂರು ಸ್ಥಳಾಂತರವಾಗುತ್ತಿದೆ, ನನ್ನೂರ ಜನ ಹೋಸ ಮನೆ, ಹೋಸ ಬದುಕಿನ ಕನಸು ಕಾಣುತ್ತಿದ್ದಾರೆ, ಹೀಗಾಗಿ ನನ್ನೂರ ಜನ “ಸಂಕ್ರಾಂತಿ” ಬಲು ಜೋರಿನಿಂದ ಆಚರಿಸುತ್ತಿದ್ದಾರೆ, ಮತ್ತೆ ನಿಮಗೆ ಕೆಂಪೆಗೌಡರು ಹೇಗೊ ಹಾಗೆ ನಮಗೆ ಶ್ರೀ ಕೃಷ್ಣದೇವರಾಯ, ಇಮ್ಮಡಿ ಪುಲುಕೇಶಿ. ನನ್ನೂರ ತಮ್ಮಂದಿರು ಬರಿ ಅದೇ ನೆಹರು, ಇಂದಿರಾ, ರಾಜೀವ, ಸೋನಿಯಾ ಅಲ್ಲದೆ ವಿವೇಕಾನಂದರು, ಭಗತಸಿಂಗ್, ಸುಭಾಶಚಂದ್ರ ಭೋಸ ಬಗ್ಗೆ ತಿಳಿದುಕೊಳ್ಳಲಿ ಅದರಲ್ಲಿ ತಪ್ಪೇನು.

ವಿವೇಕಾನಂದರು ಮಾಡಿದ ತಪ್ಪಾದರು ಎನು ಹೇಳಿ, ಅವರ ಬದುಕಿನಲ್ಲಿ ನಮ್ಮ ವಿದ್ಯಾರ್ಥಿಗಳು ತಿಳಿಯಬಾರದ್ದೆನಾದರೂ ಇದೆಯೇ? ಇದ್ದರೆ ದಯವಿಟ್ಟು ಹೇಳಿ. “ರಾಷ್ಟ್ರೀಯ ಯುವ ದಿನ”ವಾಗಿ ಆಚರಿಸುವ ವಿವೇಕಾನಂದ ಜಯಂತಿಯನ್ನು ನಿಲ್ಲಿಸಿಬಿಡುವ, ಮತ್ಯಾವ ಗಾಂಧಿ ಹುಟ್ಟಿದ ಹಬ್ಬಕ್ಕೆ ಯುವ ದಿನ ಆಚರಿಸಿದರಾಯಿತು, ಎನಂತಿರಿ?